ನಾವು - ನಮ್ಮ ಗುರಿ ಮತ್ತು ದೃಷ್ಠಿ

ಹೂವಿನಹೊಳೆ ಪ್ರತಿಷ್ಠಾನ ಹುಟ್ಟಿದ್ದು 
ಹೂವಿನಹೊಳೆಯ ಸರ್ಕಾರಿ ಹಿರಿಯ ಪಾರ್ಥಮಿಕ ಶಾಲೆ ಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಮೊದಲ ಬಾರಿಗೆ ಉಚಿತ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ಅಂದರೆ ನನ್ನ ದುಡಿಮೆಯಲ್ಲಿ ಬಂದಂತಹ ಒಂದಷ್ಟು ಪ್ರಮಾಣದ ಹಣವನ್ನು ಸರ್ಕಾರಿ ಕನ್ನಡಶಾಲೆಗಳ ಉನ್ನತಿಗಾಗಿ ಬಳಸಬೇಕು ಎನ್ನುವ ಮಹಾದಾಸೆಯಿಂದ ಪ್ರಾರಂಭ ಮಾಡಿದ್ದು, ಆದರೆ ಅದುಬರಿಯ ಪ್ರಾರಂಭವಾಗಿತ್ತು ನಂತರದಲ್ಲಿ ನನ್ನ ಕನಸಿಗೆ ಜೊತೆಯಾದವರು ಅನೇಕರು, ಈಗೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಸಕ್ರಿಯರು. ನನ್ನ ಪ್ರಮಾಣದ ಸಮಾನ ಕಾರ್ಯಗಳನ್ನು ನೋಡಿ ಕೈಜೋಡಿಸಿ, ಬೆಂಬಲಿಸಿದ ಅನೇಕರು ನೀವು ನಿಮ್ಮ ಕಾರ್ಯಗಳನ್ನು ನಿಮ್ಮ ಊರಿಗೆ ಮಾತ್ರಸೀಮಿತ ಮಾಡುವುದು ಬೇಡ ಜಗದ ಎಲ್ಲಾ ಮೂಲೆಗಳಿಗೆ ನಿಮ್ಮ ಊರಿನ ಹೆಸರು ಹಾಗೂ ನಿಮ್ಮ ಸಮಾಜಕಾರ್ಯಗಳು ತಲುಪಬೇಕು ಜೊತೆಯಲ್ಲಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಯಾಗಬೇಕು ಎನ್ನುವ ಸಲಹೆಗಳನ್ನು ಕೊಟ್ಟರು.

ಇದರಂತೆಯೇ ನಮ್ಮ ಕೆಲಸಗಳು ನಿರಂತರವಾಗಿ 2011 ರಿಂದ ನಡೆದುಕೊಂಡು ಬಂದವು, ನಾವು ಮಾಡುವ ಕೆಲಸಗಳಿಗೆ ಒಂದು ಅಧಿಕೃತ ಸ್ಥಾನ ಬೇಕು ಕಾನೂನಿನ ಅನುಸಾರವಾಗಿ ನಾವು ಎಲ್ಲಾ ನಿಯಮಗಳನ್ನು ಜಾರಿಗೆ ತರಬೇಕು ಹಾಗೂ ಇನ್ನೂಹೆಚ್ಚಿನ ರೀತಿಯಲ್ಲಿ ಕೆಲಸಗಳನ್ನು ಮಾಡಬೇಕು ಎಂದು ತೀರ್ಮಾನಿಸಿ 2015ರ ಅಕ್ಟೋಬರ್ 8 ರಂದು ಬೇಗೂರು ನೋಂದಣಿ ಅಧಿಕಾರಿಗಳ ಸಮ್ಮುಖದಲ್ಲಿ ಗೆಳೆಯ ನಾಯ್ಕಲ್ ದೊಡ್ಡಿಚಂದ್ರಶೇಖರ್, ಮಂಜು ಎಂ. ದೊಡ್ಡಮನಿ, ಸಹೋದರಿ ನಾಗರತ್ನಮ್ಮ, ಎಂ.ಟಿ. ಗೋವಿಂದರಾಜು, ಯದುನಂದನ್ ಗೌಡ ಹಾಗೂ ನಮ್ಮ ಹಿತೈಷಿಗಳಾದ ರವಿ ಕುಮಾರ್ ಸರ್ ಅವರ ಒಡಗೂಡಿ ಅಧಿಕೃತವಾಗಿ ಹೂವಿನಹೊಳೆ ಪ್ರತಿಷ್ಠಾನ ಎಂದು ನೋಂದಣಿ ಮಾಡಿಸಲಾಯಿತು, ಆರ್ಥಿಕವಾಗಿ ಅ ದಿನ ನಮ್ಮ ನೆರವಿಗೆ ಬಂದವರು ಕವಿ ನಾಗತಿಹಳ್ಳಿ ರಮೇಶ್ ಸರ್ ಅವರ ಸಹಕಾರದಿಂದ ಈ ಕಾರ್ಯನೆರವೇರಿತು.

ನಮ್ಮ ದೃಷ್ಟಿ : -
ಮೌಲ್ಯಗಳ ಜಾಡಿನಲ್ಲಿ - ಸಮಾನತೆ - ಮಾನವೀಯತೆ – ಕಾರುಣ್ಯದ ಹೆಜ್ಜೆಗಳನ್ನುಇಡುತ್ತ ಬದುಕಿನ ಅನಂತತೆಯನ್ನು ಕಾಣುವಷ್ಟು ವಿಶಾಲವಾಗಿದೆ.

ನಮ್ಮ ಗುರಿ : -
ಕ್ರೀಯಾಶೀಲತೆ ಹಾಗೂ ಚಲನೆಶೀಲತೆಯ ಮಹಾಯಾನ, ನಮ್ಮ ಮೂಲಗಳ ಪೋಷಣೆ, ಪ್ರೋತ್ಸಾಹ, ಪಾಲ್ಗೊಳ್ಳುವಿಕೆ ಮತ್ತು ಶೈಕ್ಷಣಿಕವಾಗಿ, ಸಾಂಸ್ಕ್ರತಿಕವಾಗಿ, ಸಾಹಿತ್ಯಿಕವಾಗಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಸದಾ ಹೊಸತನಕ್ಕೆ ತುಡಿಯುವುದು.