ಮುಂದಿನ ಯೋಜನೆಗಳು

ಶೈಕ್ಷಣಿಕ :
1.ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳಿಗೆ ನೀಡುತ್ತಿರುವ ಉಚಿತ ಶೈಕ್ಷಣಿಕ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಪ್ರತಿವರ್ಷ ಮುಂದುವರೆಸುವುದು.

2.ಹೂವಿನಹೊಳೆ ಸೇರಿದಂತೆ ಸುತ್ತಮುತ್ತಲಿನ 4 ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಶೈಕ್ಷಣಿಕ ಗುಣಮಟ್ಟದ ಹಾಗೂ ಪರಿಸರದ ಗುಣಮಟ್ಟವನ್ನುಅಭಿವೃದ್ಧಿ ಪಡಿಸುವುದು.
3.ಹೂವಿನಹೊಳೆ ಸರ್ಕಾರಿ ಶಾಲೆಗೆ ಸೀಮಿತವಾಗಿರುವ ಸಾಂಸ್ಕೃತಿಕ ಸ್ಪರ್ಧೆಗಳನ್ನು ಸುತ್ತಮುತ್ತಲಿನ ಎಲ್ಲಾ ಶಾಲೆ ಗಳಿಗೂ ವಿಸ್ತಾರ ಮಾಡುವುದು.
4.ಹೂವಿನಹೊಳೆ ಸರ್ಕಾರಿ ಶಾಲೆಯನ್ನು ಕೇಂದ್ರವಾಗಿಸಿ ನೀಡಿರುವ ಉಚಿತ ವಿಜ್ಞಾನ ಪರಿಕರಗಳ ಸಮರ್ಪಕ ಬಳಕೆ ಬಗ್ಗೆ ಒಂದು ವಿಶೇಷ ತಂಡವನ್ನು ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಒಳಗೊಂಡು ರಚಿಸುವುದು ಹಾಗೂ ಅಗತ್ಯ
ನಿರ್ವಹಣೆ ಮಾಡುವುದು.
5.ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಲ್ಲಿ ಕಂಪ್ಯೂಟರ್ ಅಧಾರಿತ ಸ್ಮಾರ್ಟ್ ಕ್ಲಾಸ್ ಯೋಜನೆ ಜಾರಿಗೆ ಪ್ರಯತ್ನ ಮಾಡುವುದು ಹಾಗೂ ರಾಜ್ಯ ಸರ್ಕಾರಕ್ಕೆ ಎಲ್ಲಾ ಸರ್ಕಾರಿ ಶಾಲೆಗಲ್ಲಿ ಈ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯ ಮಾಡುವುದು.
6.ಹೂವಿನಹೊಳೆ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ವಿವಿಧ ವೃತ್ತಿಪರ ತರಬೇತಿಗಳನ್ನು ಯುವ ಜನರಿಗೆ ನೀಡುವುದು.

7. ವಿವಿಧ ಗಣ್ಯರ/ ದಾನಿಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರೋತ್ಸಾಹ ದತ್ತಿಗಳನ್ನು ಸ್ಥಾಪಿಸುವುದು. 
8. ಬದುಕುಕಟ್ಟಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಜನರಿಗಾಗಿ ವಿವಿಧ ಕೃಷಿ, ಯಂತ್ರೋಪಕರಣ, ಕಂಪ್ಯೂಟರ್, ಉದ್ಯಮಶೀಲತೆ ಬಗ್ಗೆ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.

ಸಾಂಸ್ಕೃತಿಕ :
1. ಹೂವಿನಹೊಳೆ ಸಾಂಸ್ಕೃತಿಕ ಉತ್ಸವವನ್ನು ಈ ವರ್ಷದಿಂದ ಆರಂಭ ಮಾಡುವುದು. ಈ ಉತ್ಸವದಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿ, ನೆಲ ಜಲ, ಪರಿಸರ, ಜಾನಪದ ಪರಂಪರೆಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
2. ಹೂವಿನಹೊಳೆ ಪ್ರತಿಷ್ಠಾನದ ಮಾನವೀಯ ಮೌಲ್ಯಗಳ ಮಹತ್ವದ ಹೆಜ್ಜೆ "ವಿಶ್ವಾತ್ಮ ಪ್ರಶಸ್ತಿ ಪುರಸ್ಕಾರ" ವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ವಿಶ್ವದ ಬೇರೆ ಬೇರೆ ಭಾಗದಲ್ಲಿ ಸೇವೆ ಸಲ್ಲಿಸಿದ ಜೀವ ಚೇತನಗಳನ್ನು ಗೌರವಿಸುವುದು.

3. ಸಾಂಸ್ಕೃತಿಕವಾಗಿ ಸದಾ ಕ್ರಿಯಾಶೀಲವಾಗಿರುವ ದೃಷ್ಟಿಯಲ್ಲಿ ಬೆಂಗಳೂರಿನ ಹೂವಿನಹೊಳೆ ಪ್ರತಿಷ್ಠಾನದ ಕಚೇರಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿತಿಂಗಳ ಎರಡನೇ ಶನಿವಾರ ಇಲ್ಲವೇ ಭಾನುವಾರ ಆಯೋಜನೆ ಮಾಡುವುದು.

4. ಕನ್ನಡ ನಾಡು ನುಡಿ, ನೆಲ,ಜಲ, ಪರಂಪರೆ, ಸಂಸ್ಕೃತಿಗಳ ಕಾರ್ಯಕ್ರಮ ಮಾಡುವ ಸಂಸ್ಥೆಗಳೊಂದಿಗೆ ಕೈ ಜೋಡಿಸುವುದು.

5.ನಾಡಿನ ವಿವಿಧ ರಂಗ ತಂಡಗಳೊಂದಿಗೆ ಜೊತೆಗೂಡಿ ನಾಟಕ ಪ್ರದರ್ಶನಗಳನ್ನು ಆಯೋಜನೆ ಮಾಡುವುದು.

ಸಾಹಿತ್ಯಿಕ :
1.ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ತರಾಸು ಅವರ ಹೆಸರಿನಲ್ಲಿ ಯುವ ಸಾಹಿತ್ಯ ಪುರಸ್ಕಾರವೊಂದನ್ನು ಸ್ಥಾಪನೆ ಮಾಡುವುದು, ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಪ್ರಕಾರಗಳಲ್ಲಿ ಪ್ರಕಟಣೆಗೊಂಡ ಕೃತಿಗಳನ್ನು ಅಯ್ಕೆ ಮಾಡಿ, ಒಟ್ಟುಐದು ಜನ ಯುವ ಬರಹಗಾರರನ್ನು ಗೌರವಿಸುವುದು.

2. ಐ.ಎಸ್.ಬಿ.ಎನ್ ಮಾನ್ಯತೆಯೊಂದಿಗೆ ಯುವ ಬರಹಗಾರರ ಕಾವ್ಯ, ನಾಟಕ,ಕಥೆ, ಮಕ್ಕಳ ಕಥೆ, ವಿಮರ್ಶೆ ಪುಸ್ತಕಗಳನ್ನು ಪ್ರಕಟಿಸುವುದು.

3.ತಿಂಗಳಿಗೆ ಒಂದರಂತೆ ಗ್ರಾಮೀಣ ಭಾಗದ/ ನಗರ ಪ್ರದೇಶದ ವಿವಿಧ ಶಾಲೆಗಳಲ್ಲಿ ಕವಿಗೋಷ್ಠಿ/ ವಿಚಾರಗೋಷ್ಠಿ/ಚಿಂತನ ಗೋಷ್ಠಿ ಆಯೋಜನೆಮಾಡಿ, ಮಕ್ಕಳಲ್ಲಿ ಸಾಹಿತ್ಯದ ಒಲವನ್ನು ಹುಟ್ಟುಹಾಕುವ ಪ್ರಯತ್ನ ಮಾಡುವುದು, ನಾಡಿನ ಹಿರಿಯ / ಕಿರಿಯ ಸಾಹಿತಿಗಳನ್ನು ಬರಹಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು.

4.ಬೆಂಗಳೂರಿನ ಹೂವಿನಹೊಳೆ ಪ್ರತಿಷ್ಠಾನದ ಕಚೇರಿಯಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಇಲ್ಲವೇ ಭಾನುವಾರ ವಿಚಾರಗೋಷ್ಠಿ/ಕವಿಗೋಷ್ಠಿಯನ್ನು ಆಯೋಜನೆ ಮಾಡುವುದು, ನಾಡಿನ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆ ಕಲ್ಪಿಸುವುದು.

ಸಾಮಾಜಿಕ :

1.ಚಿತ್ರದುರ್ಗ ಜಿಲ್ಲೆ, ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ನಮ್ಮ ಸಾಮಾಜಿಕ ಕೆಲಸಗಳನ್ನು ರಾಜ್ಯದ ಇತರೆ
ಭಾಗಗಳಿಗೆ ಪಸರಿಸುವುದು.
2.ಭಾರತ ಸರ್ಕಾರದ ನೀತಿ ಆಯೋಗದ ಅಡಿಯಲ್ಲಿ ನೀಡುವ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ತರುವುದು.
3.ಅನ್ಯಭಾಷಿಕರಿಗೆ ಕನ್ನಡ ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುವುದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಬೆಂಗಳೂರು ಕಚೇರಿಯಲ್ಲಿ ಕನ್ನಡ ಭಾಷಾ ಕಲಿಕೆ ತರಗತಿಗಳನ್ನು ನಡೆಸುವುದು. 
4.ಗ್ರಾಮೀಣ ಪ್ರದೇಶದಿಂದ ಬೆಂಗಳೂರು ಮಹಾನಗರಕ್ಕೆ ಬರುವ ಯುವ ಪ್ರತಿಭೆಗಳಿಗೆ ಉದ್ಯೋಗ ಮಾರ್ಗದರ್ಶನ ಹಾಗೂ ಅಗತ್ಯ ನೆರವು ನೀಡುವ ಪ್ರಯತ್ನ ಮಾಡುವುದು.
5.ಅರೋಗ್ಯ ಶಿಬಿರ, ಕೌಶಲ್ಯ ಶಿಬಿರ, ಗ್ರಾಮೀಣ ಸೊಗಡಿನ ಕ್ರೀಡಾ ಶಿಬಿರ, ಹೀಗೆ ವಿವಿಧ ಶಿಬಿರಗಳನ್ನು ಏರ್ಪಡಿಸುವುದು.
6. ಹೂವಿನಹೊಳೆ ಎನ್ನುವ ಹೆಸರಿಗೆ ಮಹತ್ವ ತರುವ ನಿಟ್ಟಿನಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಈ ಹಳ್ಳಿಯನ್ನು ಅಭಿವೃದ್ಧಿ ಪಡಿಸುವುದು.