ಹೂವಿನಹೊಳೆ ಹಳ್ಳಿ

ಹೂವಿನಹೊಳೆ ಎನ್ನುವ ಸುಂದರ ಹೆಸರು :- 

ಭಾರತ ಒಕ್ಕೂಟ ವ್ಯವಸ್ಥೆಯ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿ ವ್ಯಪ್ತಿಯಲ್ಲಿ ಪ್ರಾಕೃತಿಕ ಸಂಪತ್ತಿನೊಂದಿಗೆ ಐತಿಹಾಸಿಕವಾಗಿರುವ ಸರಿ ಸೂಮಾರು ಮೂರು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ಸುಂದರವಾಗಿರುವ ಹಳ್ಳಿಯ ಹೆಸರು ಹೂವಿನಹೊಳೆ


ಊರಿನ ಹಿರಿಯರ ಮಾತಿನ ಅನುಸಾರ ನೋಡುವುದಾದರೆ ಹೆಸರಿಗೆ ತಕ್ಕಂತೆ ತೊರೆ, ಹಳ್ಳ, ನದಿಯ ದಡದಲ್ಲಿ ಕಣಗಿಲೆ ಹೂವಿನ ಗಿಡಗಳು ಸಮೃದ್ಧವಾಗಿ ಹೂವುಗಳು ಬಿಡುತ್ತಿದ್ದವು ಎನ್ನುವುದು ಮಹತ್ವ. ಇಂತಹ ಕಣಗಿಲೆ ಹೂವಿನ ಊರನ್ನು ಹೂವಿನಹಾಳು, ಹೂವಿನಹಳ್ಳ, ಹೂವಿನತೊರೆ ಮುಂದುವರೆದು ಹೂವಿನಹೊಳೆ ಎಂದು ಕರೆಯಲ್ಪಡುತ್ತಿದೆ, ಆಡುಭಾಷೆಯಲ್ಲಿ ಹೂವಿನಹಳ್ಳಿ ಎಂದು ಸಹ ಕರೆಯುತ್ತಾರೆ